ಬಿಸಿಲಿಗೆ ಬೆನ್ನ ಮಾಡಿ ನಡಿಯಂಗಾಗೈತಿ
ಬಾಲನ ಭಾವಕ್ಕಾಗಿ ಬಯಸಂಗಾಗೈತಿ
ತಿoಗಳರಡೂ ತುಂಬಿ ಬಂತು ಬಾಲ ಮಡಿಲಲಿ ಮೂಡಿ ಬಂತು II 2 II
ಮಿಡಿಯ ಮಾವಿನಕಾಯಿ ತಿನ್ನoಗಾಗೈತಿ
ಬಿಳಿಯ ಜ್ವಾಳ್ಳದ ರೊಟ್ಟಿ ಎಣ್ಣೆ ಬದನೆಕಾಯಿ ಪಲ್ಯ II 2 II
ಮಾಳಿಗೆ ಮ್ಯಾಲ ಕೂತ್ಕೊಂಡು ತಿನ್ನoಗಾಗೈತಿ
ಎಳ್ಳು ಹಚ್ಚಿದ ರೊಟ್ಟಿ ಎಳೆಯ ಚವಳಿಕಾಯೀ ಪಲ್ಯ II 2 II
ಹೊಂಗೆಯ ನೆರಳಲಿ ಕೂತ್ಕೊಂಡು ತಿನ್ನoಗಾಗೈತಿ
ಹರಕಲು ಮುರಕಲು ಕರ್ಚಿಕಾಯೀ ಹಪ್ಪಳ ಸಂಡಿಗೆ ಉಪ್ಪಿನಕಾಯಿ II 2 II
ಹೊಳೆಯ ಡಂಡಿಲಿ ಕೂತ್ಕೊಂಡು ತಿನ್ನoಗಾಗೈತಿ
ಹೂಗಾರ ಮನೆಗೆ ಹೋಗಿ ಹೂವಿನ ದಂಡಿ ಹೆಣೀಸಿಕೊಂಡು II 2 II
ಗಂಡನ ಪಕ್ಕದಲಿ ಕೂತ್ಕೊಂಡು ಮುಡಿಯOಗಾಗೈತಿ
ನಿಂತರೆ ಸೊಂಟ ನೊಯ್ಯುತೈತಿ ಕುಂತರೆ ಬೆನ್ನ ಮಲಗತೈತಿ II 2 II
ತವರೀಗೆ ಹೋಗಿ ನನಗ ಕುಂದ್ರoಗಾಗೈತಿ

0 Comments
“ದಯವಿಟ್ಟು ನಿಮ್ಮ Google account ಮೂಲಕ login ಆಗಿ comment ಮಾಡಿ.