ನಮ್ಮ ಪಯಣದ ಹಿಂದಿನ ಕಥೆ
ಜ್ಞಾನವನ್ನು ಹಂಚುವುದು ಒಂದು ಯಜ್ಞವಿದ್ದಂತೆ. "ವಿತ್ ಯು ಎಜುಕೇಷನ್ " (Education With You) ಕೇವಲ ಒಂದು ಬ್ಲಾಗ್ ಅಲ್ಲ, ಇದು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲಿನ ಪ್ರೀತಿಯಿಂದ ಹುಟ್ಟಿದ ಒಂದು ಜ್ಞಾನಯಜ್ಞ.
ಈ ಬ್ಲಾಗ್ ಹುಟ್ಟಿದ್ದು ಹೀಗೆ:
ಕನ್ನಡದ ಮಹನೀಯರ ಬಗ್ಗೆ ಓದುತ್ತಿರುವಾಗ, ಅವರ ಜೀವನಗಾಥೆಗಳು ನನ್ನನ್ನು ಸದಾ ಬೆರಗುಗೊಳಿಸುತ್ತಿದ್ದವು. ಅದೇ ರೀತಿ ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾಗ ಮಾಹಿತಿಗಳ ಕೊರತೆ ಕಾಣುತ್ತಿತ್ತು. ನಾವು ಶಾಲೆಯಲ್ಲಿ ಮಕ್ಕಳಿಗೆ ಕೇಲವು ವ್ಯಕ್ತಿಗಳ ಬಗ್ಗೆ ಬರೆದುಕೊಂಡು ಬನ್ನಿ ಎಂದಾಗ ಅವರಿಗೆ ಮಾಹಿತಿಯ ಗೊಂದಲವಾಗುತ್ತಿತ್ತು. ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಅಂತರ್ಜಾಲದಲ್ಲಿ ಹುಡುಕಿದಾಗ, ಮಾಹಿತಿ ಅಪೂರ್ಣವಾಗಿ ಅಥವಾ ಅಲ್ಲಲ್ಲಿ ಚದುರಿಹೋಗಿರುವುದು ಕಂಡುಬಂತು. ನಮ್ಮ ಹೆಮ್ಮೆಯ ವ್ಯಕ್ತಿಗಳ ಬಗ್ಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ, ಸರಿಯಾದ ಮಾಹಿತಿ ಒಂದೆಡೆ ಸಿಗದಿದ್ದಾಗ, ನಾವೇ ಏಕೆ ಆ ಕೆಲಸವನ್ನು ಮಾಡಬಾರದು? ಎಂಬ ಯೋಚನೆ ಬಂತು. ಅದೇ ಈ ಬ್ಲಾಗ್‌ನ ಹುಟ್ಟಿಗೆ ಕಾರಣವಾಯಿತು.
ನಮ್ಮ ಕನಸು ಮತ್ತು ಗುರಿಗಳು:
ನಮ್ಮ ಗುರಿ ಕೇವಲ ಮಾಹಿತಿ ನೀಡುವುದಲ್ಲ, ಬದಲಾಗಿ ಓದುಗರಲ್ಲಿ ಸ್ಫೂರ್ತಿ ತುಂಬುವುದು.
ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಪರಿಚಯವನ್ನು ಹೊಸ ಪೀಳಿಗೆಗೆ ಮಾಡಿಕೊಡುವುದು.
ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಆಕಾಂಕ್ಷಿಗಳಿಗೆ ವಿಶ್ವಾಸಾರ್ಹ ಮಾಹಿತಿಯ ಆಕರವನ್ನು ಒದಗಿಸುವುದು.
ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿಗಳ ಸಾಧನೆಗಳನ್ನು ದಾಖಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು.
ಕನ್ನಡ ಭಾಷೆಯ ಮೂಲಕವೇ ಜ್ಞಾನದ ಜ್ಯೋತಿಯನ್ನು ಬೆಳಗುವುದು.
ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರ ಪರಿಚಯ ಮಾಡಿಸುವುದು.
ಈ ಜ್ಞಾನದ ಪಯಣದಲ್ಲಿ ನೀವು ನಮ್ಮೊಂದಿಗೆ ಕೈಜೋಡಿಸಿ. ನಿಮ್ಮ ಪ್ರತಿಯೊಂದು ಅನಿಸಿಕೆ, ಸಲಹೆ ನಮಗೆ ಹೊಸ ದಾರಿ ತೋರಿಸುತ್ತದೆ.
ನಿಮ್ಮ ವಿಶ್ವಾಸಿ,
With You Education
0 Comments
“ದಯವಿಟ್ಟು ನಿಮ್ಮ Google account ಮೂಲಕ login ಆಗಿ comment ಮಾಡಿ.