ಅವಳ ಮೂಕ ಕೂಗು - "ಭಾವನಾತ್ಮಕ ಸಾಮಾಜಿಕ ಕವನ"

 


"ಅವಳ ಮೂಕ ಕೂಗು"


ಅಮ್ಮನ ಕೈಯಲ್ಲಿ ಪುಸ್ತಕ ಇರಬೇಕಿತ್ತು,

ಆದರೆ ಅದು ಬದಲಾಯ್ತು ಅಡಿಗೆ ಪಾತ್ರೆಯ ಚಮಚಕ್ಕೆ.


ಕಾಗದದ ಹೂವಿನ ಪುಟ ತಿರುವಬೇಕಿತ್ತು,

ಆದರೆ ಅದು ಬದಲಾಯ್ತು ಹೊಲದ ಹುಲ್ಲಿನ ಮುಳ್ಳಿಗೆ.


ಬೆಳಗಿನ ಗಾಳಿಯಲ್ಲಿ ಶಾಲೆಯಲ್ಲಿ ಹಾಡಬೇಕಿತ್ತು,

ಆದರೆ ಅದು ಬದಲಾಯ್ತು ಬಾವಿಯ ನೀರಿನ ಶ್ರಮದ ಶ್ವಾಸಕ್ಕೆ.


ಶಿಕ್ಷಕರ ಕಣ್ಣಲ್ಲಿ ಅಕ್ಷರದ ಬೆಳಕು ಮೂಡಬೇಕಿತ್ತು,

ಆದರೆ ಅದು ಬದಲಾಯ್ತು ಅಡಿಗೆ ಹೊಗೆಯ ಕಣ್ಣು ತುಂಬುವ ಉರಿಯಾಟಕ್ಕೆ.


ಅವಳ ಬೊಗಸೆಯೊಳಗಿನ ಬಣ್ಣದ ಕನಸುಗಳು,

ನೀರು ತರುವ ದಾರಿಯಲ್ಲಿ ಒಣಗಿ ಹೋದವು.

ಅವಳ ನಗು, ಹಾದಿಯ ಧೂಳಿನಲ್ಲಿ ಮಸುಕಾಯಿತು.

ಆದರೂ…


ಅವಳ ಕಣ್ಣುಗಳಲ್ಲಿ ಇನ್ನೂ ಕಿರಣವಿದೆ,

ಅವಳ ಹೃದಯದಲ್ಲಿ ಇನ್ನೂ ಒಂದು ಆಸೆಯಿದೆ —


ನನ್ನನ್ನೂ ಓದಲು ಬಿಡಿ… ನನ್ನ ಬದುಕನ್ನೂ ಬದಲಿಸಲು ಬಿಡಿ.”


 ಬರೆದವರು -  ಕುಮಾರಿ : ರೂಪಾ ಅರ್ಜುನ  ಯದ್ದಲಗುಡ್ಡ 

                       7 ನೇ ತರಗತಿ ವಿದ್ಯಾರ್ಥಿನಿ

                       ಸ.ಕ.ಹಿ.ಪ್ರಾ.ಶಾಲೆ ತುಮ್ಮರಗುದ್ದಿ. 

                       ತಾ&ಜಿ - ಬೆಳಗಾವಿ

ಅವಳು ಕವನ ಹೇಳುವ ವಿಡಿಯೋ : https://www.instagram.com/reel/DNvOupxyP_s/?igsh=YW1oMzA1bWJyZGJh

2 Comments

  1. ತುಂಬಾ ಮನಸ್ಸಿಗೆ ದನಾಟುತ್ತದೆ....

    ReplyDelete
  2. ತುಂಬಾ ಮನಸ್ಸಿಗೆ ದನಾಟುತ್ತದೆ....

    ReplyDelete

“ದಯವಿಟ್ಟು ನಿಮ್ಮ Google account ಮೂಲಕ login ಆಗಿ comment ಮಾಡಿ.

FA question paper Notebook LM prompt

MASTER PROMPT 📋 Copy Prompt ನೀನು ಒಬ್ಬ ಅನುಭವಿ Question Paper Setter, Assessment Expert ಹಾಗೂ Blueprint Designer ಆಗಿ ಕಾರ್ಯನಿರ್ವಹಿಸು. ನಾನು ಅಪ್‌ಲೋಡ್ ಮಾಡುವ ಪಾಠ/Notes/PDF ಅನ್ನು ಮಾತ್ರ ಆಧರಿಸಿ ಪ್ರಶ್ನೆಪತ್ರಿಕೆ ಸಿದ್ಧಪಡಿಸು. ## Input • ಪಾಠದ ಹೆಸರು: [________________] • ಒಟ್ಟು ಅಂಕಗಳು: [________________] ## ನಿಯಮಗಳು 1. ಅಪ್‌ಲೋಡ್ ಮಾಡಿದ ಪಾಠ/Notes/PDF ಅನ್ನು ಸಂಪೂರ್ಣವಾಗಿ ವಿಶ್ಲೇಷಿಸಿ, ಅದರಲ್ಲಿ ಇರುವ ಮಾಹಿತಿಯನ್ನು ಮಾತ್ರ ಬಳಸು. ಯಾವುದೇ ಸ್ವಂತ ಮಾಹಿತಿ ಸೇರಿಸಬೇಡ. 2. ಮೊದಲು ಪ್ರಮುಖ ಕಲಿಕಾ ಅಂಶಗಳನ್ನು ಗುರುತಿಸಿ, ನಂತರ ನೀಡಿರುವ ಒಟ್ಟು ಅಂಕಗಳಿಗೆ ಅನುಗುಣವಾಗಿ ಸಮತೋಲನದ ಪ್ರಶ್ನೆಪತ್ರಿಕೆ ಸಿದ್ಧಪಡಿಸು. 3. ಪಾಠದ ಸ್ವರೂಪಕ್ಕೆ ಅನುಗುಣವಾಗಿ ಅಗತ್ಯವಿರುವ ಪ್ರಶ್ನೆಗಳನ್ನು ಮಾತ್ರ ಆಯ್ಕೆಮಾಡು. ಎಲ್ಲಾ ರೀತಿಯ ಪ್ರಶ್ನೆಗಳನ್ನು ಕಡ್ಡಾಯವಾಗಿ ಸೇರಿಸಬೇಡ. ಅಗತ್ಯವಿದ್ದರೆ ಈ ಪ್ರಶ್ನೆಗಳನ್ನು ಬಳಸಬಹುದು: • ಬಹು ಆಯ್ಕೆ (MCQ) • ಬಿಟ್ಟ ಸ್ಥಳ ತುಂಬಿರಿ • ಸರಿಹೊಂದಿಸಿ ಬರೆಯಿರಿ • ಒಂದು ವಾಕ್ಯದ ಉತ್ತರ • ಎರಡು/ಮೂರು ವಾಕ್ಯದ ಉತ್ತರ • ಕಾರಣ–ಪರಿಣಾಮ • ವ್ಯತ್ಯಾಸ ಬರೆಯಿರಿ • ಉದಾಹರಣೆ ನೀಡಿ • ಸರಿ/ತಪ್ಪು • ಚಿತ್ರ ಗುರುತಿಸಿ • ಚಿತ್ರ ಬಿಡಿಸಿ ಭಾಗಗಳನ್ನು ಹೆಸರಿಸಿ • ಭಾಗ ಗುರುತಿಸಿ • ನಕ್ಷೆ ಆಧಾರಿತ ಪ್ರಶ್ನೆಗಳು • ಕೋಷ್ಟಕ ಪೂರ್ಣಗೊಳಿಸಿ • ಕ...