ಅಮ್ಮನ ಕೈಯಲ್ಲಿ ಪುಸ್ತಕ ಇರಬೇಕಿತ್ತು,
ಆದರೆ ಅದು ಬದಲಾಯ್ತು ಅಡಿಗೆ ಪಾತ್ರೆಯ ಚಮಚಕ್ಕೆ.
ಕಾಗದದ ಹೂವಿನ ಪುಟ ತಿರುವಬೇಕಿತ್ತು,
ಆದರೆ ಅದು ಬದಲಾಯ್ತು ಹೊಲದ ಹುಲ್ಲಿನ ಮುಳ್ಳಿಗೆ.
ಬೆಳಗಿನ ಗಾಳಿಯಲ್ಲಿ ಶಾಲೆಯಲ್ಲಿ ಹಾಡಬೇಕಿತ್ತು,
ಆದರೆ ಅದು ಬದಲಾಯ್ತು ಬಾವಿಯ ನೀರಿನ ಶ್ರಮದ ಶ್ವಾಸಕ್ಕೆ.
ಶಿಕ್ಷಕರ ಕಣ್ಣಲ್ಲಿ ಅಕ್ಷರದ ಬೆಳಕು ಮೂಡಬೇಕಿತ್ತು,
ಆದರೆ ಅದು ಬದಲಾಯ್ತು ಅಡಿಗೆ ಹೊಗೆಯ ಕಣ್ಣು ತುಂಬುವ ಉರಿಯಾಟಕ್ಕೆ.
ಅವಳ ಬೊಗಸೆಯೊಳಗಿನ ಬಣ್ಣದ ಕನಸುಗಳು,
ನೀರು ತರುವ ದಾರಿಯಲ್ಲಿ ಒಣಗಿ ಹೋದವು.
ಅವಳ ನಗು, ಹಾದಿಯ ಧೂಳಿನಲ್ಲಿ ಮಸುಕಾಯಿತು.
ಆದರೂ…
ಅವಳ ಕಣ್ಣುಗಳಲ್ಲಿ ಇನ್ನೂ ಕಿರಣವಿದೆ,
ಅವಳ ಹೃದಯದಲ್ಲಿ ಇನ್ನೂ ಒಂದು ಆಸೆಯಿದೆ —
“ನನ್ನನ್ನೂ ಓದಲು ಬಿಡಿ… ನನ್ನ ಬದುಕನ್ನೂ ಬದಲಿಸಲು ಬಿಡಿ.”
ಬರೆದವರು - ಕುಮಾರಿ : ರೂಪಾ ಅರ್ಜುನ ಯದ್ದಲಗುಡ್ಡ
7 ನೇ ತರಗತಿ ವಿದ್ಯಾರ್ಥಿನಿ
ಸ.ಕ.ಹಿ.ಪ್ರಾ.ಶಾಲೆ ತುಮ್ಮರಗುದ್ದಿ.
ತಾ&ಜಿ - ಬೆಳಗಾವಿ
ಅವಳು ಕವನ ಹೇಳುವ ವಿಡಿಯೋ : https://www.instagram.com/reel/DNvOupxyP_s/?igsh=YW1oMzA1bWJyZGJh

2 Comments
ತುಂಬಾ ಮನಸ್ಸಿಗೆ ದನಾಟುತ್ತದೆ....
ReplyDeleteತುಂಬಾ ಮನಸ್ಸಿಗೆ ದನಾಟುತ್ತದೆ....
ReplyDelete“ದಯವಿಟ್ಟು ನಿಮ್ಮ Google account ಮೂಲಕ login ಆಗಿ comment ಮಾಡಿ.